Tuesday, 8 June 2021

ಘಟಿಕಾಚಲದಿ ನಿಂತಾ ಹನುಮಂತಾ purandara vittala Ghatika Chaladi Ninta

 ಘಟಿಕಾಚಲದಿ ನಿಂತಾ ಹನುಮಂತಾ

ಘಟಿಕಾಚಲದಿ ನಿಂತಾ || ಪ ||


ಘಟಿಕಾಚಲದಿ ನಿಂತ ಪಟು ಹನುಮಂತನು

ಪಠನೆಯ ಮಾಡಲುತ್ಕಟದಿ ಪೊರೆವೆನೆಂದು || ಅ.ಪ ||


ಚತುರಯುಗದಿ ತಾ ಅತಿಬಲವಂತನು ಚತುರ್ಮುಖನಯ್ಯನ

ಚತುರ ಮೂರ್ತಿಗಳ ಚತುರತನದಿ ಭಜಿಸಿ

ಚತುರ್ಮುಖನಾಗಿ ಚತುರ್ವಿಧ ಫಲಕೊಡುತ || ೧ ||


ಸರಸಿಜಭವಗೋಸ್ಕರ ಕಲ್ಮಷದೂರ ವರಚಕ್ರ ತೀರ್ಥಸರ

ಮೆರೆವಾಚಲದಿ ನಿತ್ಯನರಹರಿಗೆದುರಾಗಿ

ಸ್ಥಿರಯೋಗಾಸನದಿ ವರವಕೊಡುವೆನೆಂದು || ೨ ||


ಶಂಖಚಕ್ರವಧರಿಸಿ ಭಕ್ತರ ಮನ ಪಂಕವ ಪರಿಹರಿಸಿ

ಪಂಕಜನಾಭ ಶ್ರೀಪುರಂದರವಿಠಲನ

ಬಿಂಕದ ಸೇವಕ ಸಂಕಟಕಳೆಯುತ || ೩ ||

****


ರಾಗ: ನಾಟ            ತಾಳ: ಅಟ್ಟ  (raga, taala may differ in audio)


ಘಟಿಕಾಚಲದಿ ನಿಂತ ಶ್ರೀ ಹನುಮಂತ

ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ||


ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ

ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧||


ಸರಸಿಜ ಭವಗೋಸ್ಕರ ಕಲ್ಮಷ ದೂರ ವರಚಕ್ರತೀರ್ಥ ಸರ ಮೆರವಾಚಲದಿ

ನಿತ್ಯ ನರಹರಿಗೆದುರಾಗಿ ಸ್ಥಿರ ಯೋಗಾಸನದಿ ಕರೆದು ವರಗಳ ಕೊಡುತ ||೨||


ಶಂಖ ಚಕ್ರವ ಧರಿಸಿ ಭಕ್ತರ ಮನ ಭಂಗವ ಪರಿಹರಿಸಿ


ಪಂಕಜನಾಭ ಶ್ರೀ ಪುರಂದರ ವಿಠಲನ ಬಿಂಕದ ಸೇವಕ ಸಂಕಟ ಕಳೆಯುತ ||೩||

***************


ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ

ಘಟಿಕಾ ಚಲದಿ ನಿಂತಾ


ಘಟಿಕಾ ಚಲದಿ ನಿಂತಾ ಪಟು ಹನುಮಂತನು

ಪಠನೆಯ ಮಾಡಲುತ್ಕಟದಿ ಪೋರೆವೆನೆಂದು



ಚತುರಯಗದಿ ತಾನು ಮುಖ್ಯಪ್ರಾಣನು

ಚತುರಮುಖನಯ್ಯನ

ಚತುರ ಮೂರುತಿಗಳನು ಚತುರತನದಿ ಭಜಿಸಿ

ಚರುತ ಮೂರ್ಖನಾಗಿ ಜಗಕೆ ಚತುವಿ೯ದ ಫಲವಕೊಡುತ


ಸರಸಿಜಭವಗೋಸ್ಕರ ಕಲ್ಮಷದೂರ

ವರಚಕ್ರ ತೀರ್ಥಸರ

ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ

ಸ್ಥಿರಯೋಗಸನದಿ ಕರೆದು ವರಗಳ ಕೊಡುತ


ಶಂಖಚಕ್ರವಧರಿಸಿ ಭಕ್ತರ ಮನ

ಪಂಕವ ಪರಿಹರಿಸಿ

ಪಂಕಜನಾಭ ಶ್ರೀ ಪುರಂದರವಿಠಲನ


ಬಿಂಕದ ಸೇವಕ ಸಂಕಟಕಳೆಯುತ

No comments:

Post a Comment

Craft Items - Shop Cart